ಅಂಗೈಯಲ್ಲಿ ಪಾಠ ಡಿಜಿಟಲ್ ಯುಗದಲ್ಲೂ ಪುಸ್ತಕ ಪಠ್ಯವನ್ನೇ ಅಭ್ಯಸಿಸಬೇಕಾದ ವಿದ್ಯಾರ್ಥಿಗಳ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 'ಸ್ವಯಂ' ಡಿಜಿಟಲ್ ...ಸ್ವಂತ ಶಿಕ್ಷಣಕ್ಕೆ ಸ್ವಯಂ ಆನ್‌ಲೈನ್ ಕೋರ್ಸ್ ಡಿಜಿಟಲ್ ಯುಗದಲ್ಲೂ ಪುಸ್ತಕ ಪಠ್ಯವನ್ನೇ ಅಭ್ಯಸಿಸಬೇಕಾದ ವಿದ್ಯಾರ್ಥಿಗಳ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 'ಸ್ವಯಂ' ಡಿಜಿಟಲ್ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಿದೆ. ಡಿಟಿಎಚ್ ಚಾನಲ್, ಟ್ಯಾಬ್ಲೆಟ್, ಮೊಬೈಲ್‌ಗಳಿಂದ ವಿದ್ಯಾರ್ಥಿಗಳು 10 ಲಕ್ಷ ಕೋರ್ಸ್‌ಗಳನ್ನು ಮಾಡಬಹುದಾದ ವೇದಿಕೆ ಇದಾಗಿದೆ.ಶಾಲಾ-ಕಾಲೇಜುಗಳಿಗೆ ಹೋಗಿಯೇ ಕಲಿಯಬೇಕು ಎನ್ನುವ ಸಂಪ್ರದಾಯಕ್ಕೆ ಡಿಜಿಟಲ್ ಯುಗ ಅಂತ್ಯ ಹಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ 'ಸ್ವಯಂ' ಎನ್ನುವ ಡಿಜಿಟಲ್ ವೇದಿಕೆಗೆ ಚಾಲನೆ ನೀಡಿದ್ದು, ನೂರಾರು ಆನ್‌ಲೈನ್ ಕೋರ್ಸ್‌ಗಳನ್ನು ಇದರಲ್ಲಿ ಮಾಡಬಹುದಾಗಿದೆ. ಡಿಟಿಎಚ್ ಚಾನಲ್‌ಗಳು, ಟ್ಯಾಬ್ಲೆಟ್ ಹಾಗೂ ಮೊಬೈಲ್ ಮೂಲಕ ಈ ಕೋರ್ಸ್‌ಗಳು ಲಭ್ಯವಿವೆ.ಒಂಬತ್ತರಿಂದ ಆರಂಭ: ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್ (ಎಂಒಒಸಿ)ಯ ಐಟಿ ವಿಭಾಗವಾದ 'ಮೇಡ್ ಇನ್ ಇಂಡಿಯಾ' ಅಥವಾ ಸ್ವಯಂ ಈ ಕೋರ್ಸ್‌ಗಳನ್ನು ಒದಗಿಸುತ್ತದೆ. ಒಂಬತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ ನಾನಾ ಕೋರ್ಸ್‌ಗಳು ಇದರಲ್ಲಿ ಲಭ್ಯವಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಜೆಎನ್‌ಯು, ದೆಹಲಿ ವಿವಿ ಹಾಗೂ ಅಣ್ಣಾ ವಿವಿಗಳ 1,000ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಈ ಕೋರ್ಸ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಎಲ್ಲಾ ಕೋರ್ಸ್‌ಗಳು ಉಚಿತವಾಗಿ ಲಭ್ಯವಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಕೋರ್ಸ್‌ಗಳ ಮೂಲಕ ಇನ್ನಷ್ಟು ಜ್ಞಾನ ಸಂಪಾದನೆ ಮಾಡಿಕೊಳ್ಳಲು ಸಾಧ್ಯವಿದೆ.ಎಲ್ಲರಿಗೂ ಶಿಕ್ಷಣ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾನುವಾರ, 32 ಡಿಟಿಎಚ್ ಚಾನಲ್‌ಗಳ ವೇದಿಕೆಯಾದ ಸ್ವಯಂ ಪ್ರಭಕ್ಕೆ ಚಾಲನೆ ನೀಡಿದ್ದು, ನ್ಯಾಷನಲ್ ಅಕಾಡೆಮಿಕ್ ಡೆಪೊಸಿಟರಿ (ಎನ್‌ಎಡಿ) ಕೋರ್ಸ್‌ಗಳ ಪ್ರಮಾಣಪತ್ರವನ್ನು ಆನ್‌ಲೈನ್ ಮೂಲಕ ನೀಡುತ್ತದೆ. ಎಲ್ಲಾ ಶೈಕ್ಷಣಿಕ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಡಿಜಿಟಲ್ ಸೇತುವೆಯನ್ನು ಇದು ನಿರ್ಮಿಸುತ್ತಿದೆ.